ಪಂಚಶೀಲ 1 -
	ದುಃಖದ ನಿರೋಧಕ್ಕಾಗಿ ಬುದ್ಧ ನಿರೂಪಿಸಿದ ಅಷ್ಟಾಂಗ ಮಾರ್ಗ ಸಾಧನೆಯಲ್ಲಿ ಗೃಹಸ್ಥರು ಅಳವಡಿಸಿಕೊಳ್ಳಬೇಕಾದ ಐದು ಶೀಲಗಳು. ಐದು ಕ್ಲೇಶಕಾರಕ ಪ್ರವೃತ್ತಿಗಳಿಂದ ವಿರತರಾಗುವುದೇ ಶೀಲಪಾಲನೆಯ ಉದ್ದೇಶ. 1 ಪ್ರಾಣಾತಿಪಾತ ಮಾಡುವುದರಿಂದ; 2 ಕೊಡದುದನ್ನು ಕೊಳ್ಳುವುದರಿಂದ; 3 ಸುಳ್ಳು ಹೇಳುವುದರಿಂದ; 4 ಅಬ್ರಹ್ಮಚರ್ಯದಿಂದ; 5 ಸುರಾ, ಮೈರೇಯ ಮುಂತಾದ ಎಚ್ಚರ ತಪ್ಪಿಸುವ ಸಾಮಗ್ರಿಗಳಿಂದ ಗೃಹಸ್ಥನಾದವ ದೂರವಿರಬೇಕು. ಶೀಲಶುದ್ಧಿಗೆ ಅತ್ಯಗತ್ಯವಾದ ಈ ಶಿಕ್ಷಾಪದಗಳು ಬೌದ್ಧಧರ್ಮಕ್ಕೆ ಮಾತ್ರ ವಿಶಿಷ್ಟವಾದುವಲ್ಲ; ಎಲ್ಲ ಧರ್ಮಗಳಿಗೂ ಸಾಮಾನ್ಯವಾದ ವ್ರತಗಳಿವು.

	ಭಿಕ್ಷುಗಳಿಗೆ ಬುದ್ಧ ದಶಶೀಲಗಳನ್ನು ಹೇಳಿದ್ದಾನೆ.							(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ